ಫಾದರಸ ಡೇ – ವಿಶ್ವ ಅಪ್ಪಂದಿರ ದಿನಾಚರಣೆ
ಮದರಸ ಡೇ – ವಿಶ್ವ ಅಮ್ಮಂದಿರ ದಿನಾಚರಣೆ
ಪಾದರಸ ಡೇ – ಪಾದರಸ ಕಂಡು ಹಿಡಿದ ದಿನ
ಮಾದರಸ ಡೇ – ಬಸವಣ್ಣನವರು ಆಚರಿಸಿದ ಮೊದಲ ಅಪ್ಪಂದಿರ ದಿನಾಚರಣೆ
ಮದರಸಾ ಡೇ – ಮಹಮ್ಮದ್ ಗವಾನನು ಮದರಸಾ ಕಟ್ಟಿದ ದಿನ.
ಫಾದರಸ ಡೇ – ವಿಶ್ವ ಅಪ್ಪಂದಿರ ದಿನಾಚರಣೆ
ಮದರಸ ಡೇ – ವಿಶ್ವ ಅಮ್ಮಂದಿರ ದಿನಾಚರಣೆ
ಪಾದರಸ ಡೇ – ಪಾದರಸ ಕಂಡು ಹಿಡಿದ ದಿನ
ಮಾದರಸ ಡೇ – ಬಸವಣ್ಣನವರು ಆಚರಿಸಿದ ಮೊದಲ ಅಪ್ಪಂದಿರ ದಿನಾಚರಣೆ
ಮದರಸಾ ಡೇ – ಮಹಮ್ಮದ್ ಗವಾನನು ಮದರಸಾ ಕಟ್ಟಿದ ದಿನ.
ದೆವ್ವಲಪರ್ ಅಂಡ್ ಬಿಳ್ಡರ್ : ಭೂತ ಬಂಗಲೆಗಳನ್ನು ಕಟ್ಟಡಗಳನ್ನೂ ದೆವ್ವ ಹಿಡಿದಂತೆ ಕಟ್ಟುವಾತ, ಬಾಡಿ ಬಿಲ್ಡರ್‌ಗಳನ್ನು ಹೊಂದಿ ಕೆಲಸ ಮಾಡಿಸುವಾತ
ಪೀಕಲಾಟ :Peak hourನಲ್ಲಿ ಪರದಾಟ
ಸಮರ್ಥನೆ : ಪ್ರಶ್ನೆಗೆ ಮರುಪ್ರಶ್ನೆ ಹಾಕುವ ಕಾಯಕ
ಸೊಪ್ಪಿನರಸ : ವಾಕಿಂಗ್ ಆದಮೇಲೆ ಸೊಪ್ಪಿನ ರಸವನ್ನು ಕುಡಿದು ಬೀಗುವ ರಾಜರು..!
ಬಿರಿಯಾನಿ : ಹೊಟ್ಟೆ ಬಿರಿಯೋ ಹಾಗೆ “ಬಿರಿಯಾನ” ಕೈಗೊಳ್ಳುವಾತ
ಸಾಲಿಯಾನ : ಸಾಲಿಗೆ ಹೋಗುವ ಕಾಯಕ, ಸ್ಕೂಲ್ ಯಾತ್ರೆ(ತಾ-ಪತ್ರೆ)..!
ಸಾಲಿಯಾನಿ : ಶಾಲಾಬಾಲಕ(ಕಿ)
ಸಾಂಗ್ಲಿಯಾನ : ಸಾಂಗ್ಲಿಗೆ ಯಾತ್ರೆ
ಉದ್ರಿಕ್ತ : ಉದ್ರಿ ಕೇಳಿದಾಗ..!
ಪ್ರೆಸ್ತಾಪ : ಬಿಸಿಯೇರಿದ ಪತ್ರಿಕಾಗೋಷ್ಠಿ
ಅಡಪಂಥೀಯ : ರಾಜಕೀಯಕ್ಕಾಗಿ ತತ್ವ, ಆದರ್ಶ ಸಿದ್ಧಾಂತ “ಮುಂತಾದವು”ಗಳನ್ನು ಅಡವಿಡುವಾತ..!
ನಡುಪಂಥೀಯ : ಎಡಪಂಥೀಯ-ಬಲಪಂಥೀಯ ದಂಪತಿಗಳಿಗೆ ಜನಿಸಿದವ.
ನಿರ್ಬಲಪಂಥೀಯ : ಬಲಪಂಥೀಯತೆಯ ವಿರುದ್ಧಾರ್ಥಕ ಶಬ್ಧ, ಬಲಪಂಥೀಯತೆ ಮನಸ್ಥಿತಿ ಇಲ್ಲದವನು
Edible Oil : ಎಡೆಬಲ್ಲ ಆಯಿಲ್, ತುಪ್ಪ
ಶೇಪಿಣಿ : ಉತ್ತಮವಾಗಿ ‘ಫಿಗರ್’, ಶೇಪ್ maintain ಮಾಡಿರುವಾಕೆ
Northen allaiacne : ನಾರದನ ತಂಡ
ಅಲೆಗ್ಝಾಂಡರ್ : ಜಗತ್ತಿನಲ್ಲಿ ಅಲೆಯೆಬ್ಬಿಸಿ ಅಲೆಡಾಡಿದಾತ.
ನಾರ್ತಿಂಡಿ : ಉತ್ತರ ಭಾರತದ ತಿಂಡಿ
ನಾರ್ತಿಂಡಿಯನ್ : ನಾರ್ತಿಂಡಿ ಭಕ್ಷಕ
ಜಲಸಂಧಿ : ಜಲಭಾಧೆ ತೀರಿಸಿಕೊಳ್ಳಲು ಇರುವ ಸಂದಿ
ಬಡ್ತ : ಬಡ್ತಿ ಕೊಟ್ಟಾದಮೇಲೆ
ಸರ್ವಾಧಿಕಾರ : ಸಪ್ಲೈಯರ್‍ನ ಅಧಿಕಾರ
ಎಡಪ್ಯಾಂಟೀಯರು : ಪ್ಯಾಂಟ್ ಹಾಕಿಕೊಳ್ಳುವಾಗ ಎಡಗಾಲನ್ನು ಮೊದಲು ಹಾಕುವವರು
ಬ್ರೇಕಿಂಗ್ ನ್ಯೂಸ್ : ದಿನವೆಲ್ಲಾ ಆಗಾಗ ಬರುವ ಅದೇ “ಕಿತ್ತುಹೋದ” ಸುದ್ದಿ!
ಅಪಾರ್ಥ ಕೋಶ ಇತ್ತೀಚೆಗೆ ಬರೆಯೋದು ನಿಲ್ಸಿಬಿಟ್ಟಿದ್ದೆ. ಈಗ ಸುರು ಹಚ್ಚಿಕೊಳ್ಳೋಣ ಅಂತಿದೀನಿ. ಜೊತೆಗೆ ಒಂದಿಷ್ಟು ಚಮಕ್ ಚಮಕ್ ಕೂಡಾ ನೀಡಬೇಕಿದೆ ಬ್ಲಾಗಿಗೆ. ಪಂಚ್ ಲೈನ್ ನಂತೇನೇ ಇದೂ ಬಂದ್ರೆ ಚೆಂದ ಅಂದ್ಕೊಂಡಿದೀನಿ.
Welcome to WordPress.com. This is your first post. Edit or delete it and start blogging!