Apartha kosha

ದೆವ್ವಲಪರ್ ಅಂಡ್ ಬಿಳ್ಡರ್, ಪೀಕಲಾಟ, ಸಮರ್ಥನೆ, ಸೊಪ್ಪಿನರಸ, ಸಾಲಿಯಾನ, ಸಾಲಿಯಾನಿ, ಬಿರಿಯಾನಿ

June 18, 2008 · 2 Comments

ದೆವ್ವಲಪರ್ ಅಂಡ್ ಬಿಳ್ಡರ್ : ಭೂತ ಬಂಗಲೆಗಳನ್ನು ಕಟ್ಟಡಗಳನ್ನೂ ದೆವ್ವ ಹಿಡಿದಂತೆ ಕಟ್ಟುವಾತ, ಬಾಡಿ ಬಿಲ್ಡರ್‌ಗಳನ್ನು ಹೊಂದಿ ಕೆಲಸ ಮಾಡಿಸುವಾತ

 

ಪೀಕಲಾಟ :Peak hourನಲ್ಲಿ ಪರದಾಟ

 

ಸಮರ್ಥನೆ : ಪ್ರಶ್ನೆಗೆ ಮರುಪ್ರಶ್ನೆ ಹಾಕುವ ಕಾಯಕ

 

ಸೊಪ್ಪಿನರಸ : ವಾಕಿಂಗ್ ಆದಮೇಲೆ ಸೊಪ್ಪಿನ ರಸವನ್ನು ಕುಡಿದು ಬೀಗುವ ರಾಜರು..!

 

ಬಿರಿಯಾನಿ : ಹೊಟ್ಟೆ ಬಿರಿಯೋ ಹಾಗೆ “ಬಿರಿಯಾನ” ಕೈಗೊಳ್ಳುವಾತ

 

ಸಾಲಿಯಾನ : ಸಾಲಿಗೆ ಹೋಗುವ ಕಾಯಕ, ಸ್ಕೂಲ್ ಯಾತ್ರೆ(ತಾ-ಪತ್ರೆ)..!

 

ಸಾಲಿಯಾನಿ : ಶಾಲಾಬಾಲಕ(ಕಿ)

 

ಸಾಂಗ್ಲಿಯಾನ : ಸಾಂಗ್ಲಿಗೆ ಯಾತ್ರೆ

Categories: Blogroll
Tagged: , , , , , , , ,