ದೆವ್ವಲಪರ್ ಅಂಡ್ ಬಿಳ್ಡರ್ : ಭೂತ ಬಂಗಲೆಗಳನ್ನು ಕಟ್ಟಡಗಳನ್ನೂ ದೆವ್ವ ಹಿಡಿದಂತೆ ಕಟ್ಟುವಾತ, ಬಾಡಿ ಬಿಲ್ಡರ್‌ಗಳನ್ನು ಹೊಂದಿ ಕೆಲಸ ಮಾಡಿಸುವಾತ
ಪೀಕಲಾಟ :Peak hourನಲ್ಲಿ ಪರದಾಟ
ಸಮರ್ಥನೆ : ಪ್ರಶ್ನೆಗೆ ಮರುಪ್ರಶ್ನೆ ಹಾಕುವ ಕಾಯಕ
ಸೊಪ್ಪಿನರಸ : ವಾಕಿಂಗ್ ಆದಮೇಲೆ ಸೊಪ್ಪಿನ ರಸವನ್ನು ಕುಡಿದು ಬೀಗುವ ರಾಜರು..!
ಬಿರಿಯಾನಿ : ಹೊಟ್ಟೆ ಬಿರಿಯೋ ಹಾಗೆ “ಬಿರಿಯಾನ” ಕೈಗೊಳ್ಳುವಾತ
ಸಾಲಿಯಾನ : ಸಾಲಿಗೆ ಹೋಗುವ ಕಾಯಕ, ಸ್ಕೂಲ್ ಯಾತ್ರೆ(ತಾ-ಪತ್ರೆ)..!
ಸಾಲಿಯಾನಿ : ಶಾಲಾಬಾಲಕ(ಕಿ)
ಸಾಂಗ್ಲಿಯಾನ : ಸಾಂಗ್ಲಿಗೆ ಯಾತ್ರೆ